

Ravana abducts Sita using Pushpaka Vimana.
Rama and Lakshmana arrive in the southern part of India in search of Sita.
In a place called Kishkindha, Rama and Lakshmana meet Sugriva and Hanuman, who were living in forest in fear of mighty King Vali, brother of Sugriva.
On hearing Sugriva’s troubles, Rama tells he will help him to get rid of Vali. But despite Rama’s assurance Sugriva aware of the great power of Vali, expresses doubts about Rama’s valour.
Rama asks Sugriva, what should be done to gain confidence of Sugriva. Sugriva asks Rama to do the same like Vali who is able to pierce single arrow through seven Sala trees. To show his strength Rama darted single arrow through the seven Sala trees.
ರಾವಣ ಸೀತೆಯನ್ನು ಅಪಹರಿಸಿದ ನಂತರದಲ್ಲಿ ರಾಮ ಮತ್ತು ಲಕ್ಷ್ಮಣ ಸೀತೆಯ ಹುಡುಕಾಟ ಮಾಡುತ್ತಾ ಭಾರತದ ದಕ್ಷಿಣ ಭಾಗಕ್ಕೆ ತಲುಪುತ್ತಾರೆ.
ಕಿಶ್ಕಿಂದೆಯಲ್ಲಿ ರಾಮ ಮತ್ತು ಲಕ್ಷ್ಮಣ ರಿಗೆ ರಾಜ್ಯ ಭ್ರಷ್ಟರಾಗಿ ಜೀವನ ಸಾಗಿಸುತ್ತಿದ್ದ ಸುಗ್ರೀವ ಮತ್ತು ಹನುಮಂತರ ಪರಿಚಯ ಆಗುತ್ತದೆ.
ಸುಗ್ರೀವನ ತೊಂದರೆಗಳನ್ನು ತಿಳಿದ ರಾಮ ಅವನಿಗೆ ಸಹಾಯ ಮಾಡುವುದಾಗಿ ಹೇಳುತ್ತಾನೆ. ವಾಲಿಯನ್ನು ಸೋಲಿಸುವುದಾಗಿ ಹೇಳುತ್ತಾನೆ. ಆದರೆ ರಾಮನ ಆಶ್ವಾಸನೆಯ ಹೊರತಾಗಿಯೂ ಸುಗ್ರೀವನಿಗೆ ವಾಲಿಯ ಅಗಾಧ ಶಕ್ತಿಯ ಅರಿವು ಇದ್ದುದರಿಂದ ರಾಮನ ಶಕ್ತಿಯ ಮೇಲೆ ನಂಬಿಕೆ ಇರುವುದಿಲ್ಲ. ಆಗ ರಾಮನು ಸುಗ್ರೀವನ ಬಳಿ ಕೇಳುತ್ತಾನೆ, ತನ್ನ ಬಲದ ಮೇಲೆ ವಿಶ್ವಾಸ ಬರಲು ಏನು ಮಾಡಬೇಕು ಎಂದು.
ಆಗ ಸುಗ್ರೀವನು ವಾಲಿಯು ಬಿಲ್ಲಿನಿಂದ ಬಿಟ್ಟ ಬಾಣವನ್ನು ಏಳು ಸಾಲ ವೃಕ್ಷಗಳ ಮೂಲಕ ತೂರಿಸುವ ಸಾಮರ್ಥ್ಯ ಹೊಂದಿರುವುದರಿಂದ ಅದನ್ನೇ ಮಾಡಿ ತೋರಿಸು ಎಂದು ರಾಮನಿಗೆ ಕೇಳುತ್ತಾನೆ. ತನ್ನ ಸಾಮರ್ಥ್ಯ ತೋರಿಸಲು ರಾಮನು ಬಿಲ್ಲಿನಿಂದ ಬಾಣವನ್ನು ಬಿಟ್ಟು ಏಳು ಸಾಲ ವೃಕ್ಷಗಳ ಮೂಲಕ ತೂರಿಸುತ್ತಾನೆ.